Naanu yaru ?
ಇತಿಹಾಸವನ್ನು ಈಗ ಬರೆಯಬೇಕು
ನಾನ್ಯಾರು? ನನ್ನ ಹೆಸರೇನು?
ಹೇಳುವಿರಾ...
ನನ್ನ ಸಮಾಜದ ಹೆಸರೇನು?
ನನ್ನ ಸಮಾಜದ ಇತಿಹಾಸವೇನು?
ಹೆಸರಿನ ಗೊಂದಲದಲ್ಲೇ ಇದ್ದರೆ
ತಿಳಿದುಕೊಳ್ಳಿ ಇತಿಹಾಸವನ್ನು ನಾವು ಕಳೆದುಕೊಂಡಿರುವೆವು.
ಕೆಲವರು ಹೇಳುತ್ತಾರೆ .....
ನಾವು ಗಡೇರಿಯಾ ಅಲ್ಲ, ಗಡ ಆರ್ಯ ಎಂದು
ನಾವು ಗದ್ಧಿ ಅಲ್ಲ, ಬಗ್ಹೇಲ್ ವಂಶದರೆಂದು
ನಾವು ಪಶುಪಾಲರಲ್ಲಾ, ಪಾಲ್ ಕ್ಷತ್ರಿಯರೆಂದು
ಕೆಲವರೆನ್ನುತ್ತಾರೆ, ನಾವು ಕುರಿಗಾರ್ ಎಂದು
ಕೆಲವರೆನ್ನುತ್ತಾರೆ, ನಾವು ದನ-ಗಾರ್ ಎಂದು
ಕೆಲವರೆನ್ನುತ್ತಾರೆ, ನಾವು ಕುರುವಂಶಿಯರೆಂದು
ಕೆಲವರೆನ್ನುತ್ತಾರೆ, ನಾವು ಯದುವಂಶಿಯರೆಂದು
ಕೆಲವರು ಹೇಳುತ್ತಾರೆ.....
ಕುರುಬರಲ್ಲ ನಾವು ಹಾಲುಮತದವರೆಂದು
ಭರವಾಡರಲ್ಲ ನಾವು ಮಾಲಧಾರಿಗಳೆಂದು
ರಾಬರಿ ಅಲ್ಲ ರಹಬಾರ್ ಎಂದು
ಮಹಾರಾಷ್ಟ್ರದ ಧನಗಾರ್ ಅಲ್ಲ, ಇಂದೋರ್ ನ ಹೊಲ್ಕರ್ ಎಂದು
ತಮಿಳುನಾಡಿನ ಕುರುಂಬನ್ ನಾವು, ಆಂಧ್ರದ ಕುರುಮ ನಾವು.
ಮತ್ತೊಬ್ಬರು ಹೇಳಿದರು
ನಾವು ದನದ ಆಗರ - ದಂಗರ್ ಎಂದು
ಮಹಾರಾಷ್ಟ್ರದ ದಂಗರ್, ಇಂದೋರ್ ನ ಹೊಲ್ಕರ್ ನಾವು
ಭಾರತದ ಭೂಪಾಲ್ ನಾವು, ಮತ್ತು ಅಂತರ್ರಾಷ್ಟೀಯ ಶೆಫರ್ಡ್ ನಾವು
ಕೆಲವರು ಹೇಳುತ್ತಾರೆ
ಚಂದ್ರಗುಪ್ತನೇ ನಮ್ಮ ಇತಿಹಾಸವೆಂದು
ಹೊಲ್ಕರ್ ನಮ್ಮ ಅತೀತವೆಂದು
ಬಡೋದಾ ನರೇಶ್ ನಮ್ಮ ಪ್ರತಿಷ್ಠೆಎಂದು
ಹೊಯ್ಸಳ ರಾಜ ನಮ್ಮ ಗೌರವವೆಂದು
ಮತ್ತೊಬ್ಬರೆನ್ನುತ್ತಾರೆ
ವಿಜಯನಗರ ಸಾಮ್ರಾಟರು ನಾವು
ಮೈಸೂರಿನ ರಾಜರು ನಾವು, ಕುರುನಾಡ ನರೇಶರು ನಾವೆಂದು
ನಮ್ಮ ಅತೀತ ಗೌರವಶಾಲಿಯಾಗಿದ್ದಲ್ಲಿ
ನಮ್ಮ ಇತಿಹಾಸದಲ್ಲಿ ನೀರವತೆ ಏಕೆ?
ನಾನು ಯಾರು? ನನ್ನ ಹೆಸರೇನು?
ನನ್ನ ಸಮಾಜದ ಹೆಸರೇನು
ನನ್ನ ಸಮಾಜದ ಇತಿಹಾಸವೇನು?
ಹಲವಾರು ವರ್ಷಗಳಿಂದಾ....ಶತಾಬ್ಧಗಳಿಂದಾ ..... ಈ ಚರ್ಚೆ ಜಾರಿಯಲ್ಲಿದೆ
ಹೆಸರಿನ ಗೊಂದಲದಲ್ಲೇ ಸಿಲುಕಿದ್ದರೆ
ತಿಳಿದುಕೊಳ್ಳಿ, ನಾವು ಇತಿಹಾಸವನ್ನು ಕಳೆದುಕೊಳ್ಳುತ್ತೇವೆ
ಪೂರ್ವಜರು ಇತಿಹಾಸ ಸೃಷ್ಟಿಸಿದರು
ಅದನ್ನು ಬರೆದಿಟ್ಟವರು ಬೇರೊಬ್ಬರು
ಆದರೆ ಈಗ ನಮ್ಮ ಇತಿಹಾಸ ನಾವೇ ಸೃಷ್ಟಿಸಿ ನಾವೇ ಬರೆಯೋಣ.
ಬಿಡುವಿನಲ್ಲಿ, ಹೌದು....ಬಿಡುವಿನಲ್ಲಿ
ವಿಚಾರಗಳನ್ನು ಅಗೆಯೋಣ, ಇತಿಹಾಸವನ್ನು ಹುಡುಕೋಣ
ನಿರ್ಜೀವತೆಯಲ್ಲಿ ಮತ್ತೆ ಜೀವತುಂಬೋಣಾ
ಇತಿಹಾಸದಲ್ಲಿ ಕಳೆದುಹೋದ ನಮ್ಮ ಹೆಸರನ್ನು ಹುಡುಕೋಣ
ಬಿಡುವಿನಲ್ಲಿ, ಹೌದು.... ಬಿಡುವಿನಲ್ಲಿ ಇದೆಲ್ಲ ಕಂಡಿತ ಮಾಡೋಣ
ಈಗ ಕಾಲ ಬಂದಿದೆ ... ಹೌದು, ಈಗ ಕಾಲ ಬಂದಿದೆ
ಭವಿಷ್ಯದೆಡೆಗೆ ನೋಡಿ, ವರ್ತಮಾನವನ್ನು ಸೃಷ್ಠಿಸಿ
ನಿರ್ಜೀವಿಗಳನ್ನಲ್ಲ ಜೀವಂತರನ್ನು ಉದ್ದರಿಸಿ
ಬನ್ನಿ ನಾವೆಲ್ಲರೂ ಸೇರಿ ಒಂದು ನವ ನಾಡು ಕಟ್ಟೋಣ
ಅದರಲ್ಲಿ ಎಲ್ಲರೂ ಸ್ವತಂತ್ರರು ಹಾಗು ಸಮಾನರಿರಬೇಕು
ಪರಸ್ಪರ ಬಂಧುತ್ವವಿದ್ದು ಎಲ್ಲರಿಗೂ ನ್ಯಾಯ ಸಿಗಬೇಕು
ಅಂತಹ "ಅಶೋಕ ರಾಜ್ಯ" ಕಟ್ಟೋಣ
ನಮ್ಮ ಹೆಸರು ಪ್ರಜ್ವಲಿಸಲಿ ನಮ್ಮ ಸಮಾಜ ಅಮರವಾಗಲಿ
ಅರಿತುಕೊಳ್ಳಿ.....ನಿಶ್ಚಯಿಸಿಕೊಳ್ಳಿ ....ಇತಿಹಾಸವನ್ನು ಈಗ ರಚಿಸಬೇಕಾಗಿದೆ.
original written by shri akkisagar..
translated by seema Aarella...
Pl think Kuruba .. Lets build our sweet Home and banni Ithihasa rachisona...